ಮೇಜರ್ ಜನರಲ್ ಚಿತ್ತೂರು ವೇಣುಗೋಪಾಲ ಅವರು (೧೪ ನವೆಂಬರ್ ೧೯೨೭-೨೭ ಏಪ್ರಿಲ್ ೨೦೨೧) ಭಾರತೀಯ ಸೇನೆಯ ದಂಡ ನಾಯಕರಾಗಿದ್ದರು. ೧೯೭೧ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅವರು ವಹಿಸಿದ ಪಾತ್ರಕ್ಕಾಗಿ ಅವರಿಗೆ ಮಹಾವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. == ಆರಂಭಿಕ ಜೀವನ == ಮೇಜರ್ ಜನರಲ್ ಚಿತ್ತೂರು ವೇಣುಗೋಪಾಲರು ಆಂಧ್ರಪ್ರದೇಶದ ತಿರುಪತಿಯಲ್ಲಿ ೧೯೨೭ರ ನವೆಂಬರ್ ೧೪ರಂದು ಜನಿಸಿದರು. ಅವರ ತಂದೆಯ ಹೆಸರು ಶ್ರೀ ಸಿ. ಚಿನ್ನಸ್ವಾಮಿ. == ಸೇನಾ ವೃತ್ತಿಜೀವನ == ಮೇಜರ್ ಜನರಲ್ ಚಿತ್ತೂರು ವೇಣುಗೋಪಾಲರನ್ನು ೧೯೫೦ರ ಡಿಸೆಂಬರ್ ೧೦ ರಂದು ೧ ನೇ ಗೂರ್ಖಾ ರೈಫಲ್ಸ್ (ದಿ ಮಲೌನ್ ರೆಜಿಮೆಂಟ್)ನಲ್ಲಿ ಭಾರತೀಯ ಸೇನೆಗೆ ನಿಯೋಜಿಸಲಾಯಿತು. ೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ, ಅವರು ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಹೊಂದಿದ್ದರು ಮತ್ತು ಪೂರ್ವ ವಲಯದ ಜೆಸ್ಸೋರ್ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ೫/೧ ಗೂರ್ಖಾ ರೈಫಲ್ಸ್ ಬೆಟಾಲಿಯನ್ ಅನ್ನು ಕಮಾಂಡಿಂಗ್‌ ಮಾಡುತ್ತಿದ್ದರು. ೧೯೭೧ರ ಡಿಸೆಂಬರ್ ೪ ರಂದು, ಅವರ ತುಕಡಿಯು ಉತ್ತಾಲಿ ಮತ್ತು ದರ್ಶನದಲ್ಲಿ ಉತ್ತಮವಾದ ಭದ್ರತೆಯ ಪಾಕಿಸ್ತಾನದ ನೆಲೆಗಳನ್ನು ಎದುರಿಸಿತು, ಇವು ವಿಸ್ತಾರವಾದ ಸಂವಹನ ಕಂದಕಗಳೊಂದಿಗೆ ಪರಸ್ಪರ ಸಂಪರ್ಕ ಹೊಂದಿದ ಕಾಂಕ್ರೀಟ್ ಪಿಲ್ಬಾಕ್ಸ್ಗಳ ಸರಣಿಯನ್ನು ಹೊಂದಿದ್ದವು. ಲೆಫ್ಟಿನೆಂಟ್ ಕರ್ನಲ್ ವೇಣುಗೋಪಾಲರು ದಾಳಿಯ ಯೋಜನೆಯನ್ನು ರೂಪಿಸಿದರು. ಅದನ್ನು ಅವರು ವೈಯಕ್ತಿಕವಾಗಿ ಮುನ್ನಡೆಸಿದರು. ಎರಡು ಸ್ಥಾನಗಳನ್ನು ವಶಪಡಿಸಿಕೊಂಡ ನಂತರ, ೫/೧ ಗೂರ್ಖಾ ರೈಫಲ್ಸ್ ಬೆಟಾಲಿಯನ್ ಶತ್ರು ಪಡೆಗಳನ್ನು ಬೆನ್ನಟ್ಟಿತು. ಇದು ಮೂರು ದಿನಗಳ ನಂತರ ಜೆನಿಡಾವನ್ನು ವಶಪಡಿಸಿಕೊಳ್ಳಲು ಕಾರಣವಾಯಿತು. ಅವರ ನಾಯಕತ್ವ ಮತ್ತು ಆಕ್ರಮಣಕಾರಿ ಯುದ್ಧ ಯೋಜನೆಗಳಿಂದಾಗಿ ಸೇನೆಯು ದೊಡ್ಡ ಲಾಭಗಳನ್ನು ಗಳಿಸಿದ್ದಕ್ಕಾಗಿ, ಅವರಿಗೆ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ನೀಡಲಾಯಿತು. == ಉಲ್ಲೇಖಗಳು ==